'ಸರ್ವೇ ಜನಃ ಸುಖಿನೋ ಭವಂತು'



ಕಣ್ತುಂಬ ನಿದ್ರೆ, ಹೊಟ್ಟೆತುಂಬಾ ಊಟ, ಒಂದಷ್ಟು ಚೆಂದದ ಬಟ್ಟೆ, ತಲೆ ಮೇಲೆ ಒಂದು ಸೂರು,ಮನ ತುಂಬಾ ಕುಶಿ, ಇದೇ ತಾನೆ ಎಲ್ಲ ಮನುಷ್ಯರೂ ಬಯಸೋದು. ದಿನದ ಒಂದರ್ದ ಗಂಟೆ ಚಿಂತಿಸಬಲ್ಲ ಮನುಷ್ಯ ನೆಮ್ಮದಿಯ, ಸುಖದ ಹಾದಿಯನ್ನೇ ಹುಡುಕುತ್ತಾನೆ.

ನಾವು ಪರಸ್ಪರ ಅರಿಯುವುದನ್ನು ಬಿಟ್ಟು, ಜರೆಯುವುದನ್ನೇ ಕಾಯಕ ಮಾಡಿ ಕೊಂಡಿದ್ದೇವೆ.ನಮ್ಮೊಳಗಿನ ತಪ್ಪುಕಲ್ಪನೆಗಳನ್ನು ನಿವಾರಿಸುವ ಯಾವ ಪ್ರಯತ್ನಗಳನ್ನೂ ನಾವು ಮಾಡುತ್ತಿಲ್ಲ .ಯಾವ ವ್ರತ್ತದಲ್ಲಿ ಯಾ ಬೀದಿಯಲ್ಲಿ ಯಾವ ಬಣ್ಣದ ಪತಾಕೆ ಹಾರಿದರೂ ಯಾರ ಹೊಟ್ಟೆನೂ ತುಂಬೋದಿಲ್ಲ. ಸುಮ್ಮನೆ ಇಲ್ಲ ಸಲ್ಲದ ವಿಚಾರಕ್ಕೆ ಕಿವಿಯಾನಿಸಿ,ಅಸಂಬದ್ದ ಗುಮಾನಿಗಳಿಗೆ ತಲೆ ಬಿಸಿ ಮಾಡಿಕೊಂಡು, ಬಿ.ಪಿ ಏರಿಸಿಕೊಂಡು, ಅಭದ್ರತೆಯಿಂದ ಬದುಕಬೇಕಾದ ಸ್ಥಿತಿಗೆ ನಮ್ಮನ್ನು ನಾವು ತಳ್ಳಿಕೊಳ್ಳುವುದಾದ್ರೂ ಯಾಕೆ?

ಯಾವುದೇ ಸಭೆ, ಸಮಾರಂಭ, ಉತ್ಸವ, ಹಬ್ಬ, ಜಾತ್ರೆ, ಜನ ಮನಕ್ಕೆ ಒಂದಷ್ಟು ಭರವಸೆ, ನಿರೀಕ್ಷೆ, ನೆಮ್ಮದಿ, ಸಂತೋಷವನ್ನು ನೀಡುವಲ್ಲಿ ಯಶಸ್ವಿಯಾದರೆ ಮಾತ್ರ ಅದರ ಉದ್ದೇಶ ಸಾರ್ಥಕ.

'ಸರ್ವೇ ಜನಃ ಸುಖಿನೋ ಭವಂತು'

‪#‎ಉಫಾಕು‬ # Just for Peace#

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು