ಈ ಸ್ವಾತಂತ್ರ ಬೇಕಿತ್ತೇ ?

ಮೇಸ್ಟ್ರು ಅಂದ್ರು ,

20 ವರ್ಷ ಮೊದಲು,ಭಾರತ ಅಭಿವ್ರದ್ದಿ  ಶೀಲ ರಾಷ್ಟ್ರ 

ಕಲಾಂ ಅಂದ್ರು, 
20 -20 ಗೆ ಭಾರತ ಅಭಿವ್ರದ್ದಿ ಹೊಂದಿದ  ರಾಷ್ಟ್ರ 

ಶ್ರೀ ಸಾಮಾನ್ಯ ತಲೆ ಕೆರೆದು ಕೇಳ್ತಾನೆ 
ಯಾವ  ರಾಷ್ಟ್ರ? ಯಾವ  ಅಭಿವ್ರದ್ದಿ? ಯಾವ ಭಾರತ ?

ನೂರಾರು ಪ್ರಶ್ನೆಗಳು,ಅದಕ್ಕೆ  ತಕ್ಕ ಉತ್ತರಗಳು 
ಸಮಾಜ, ಇತಿಹಾಸ,ರಾಜಕೀಯದ ಪರೀಕ್ಷೆ ಪಾಸಾಗಲು 

ಇಲ್ಲದವರ ತಲೆಯ ಮೇಲೆ ಉಳ್ಳವರ ದರ್ಪದ ಕಾಲು
ಸ್ವಾತಂತ್ರ್ಯದ  ಯುದ್ದದಲ್ಲಿ  ಬಡವನಿಗೆ ಸತತ ಸೋಲು 

೬ ೬  ವರ್ಷ ಕಳೆದರೂ  ಗುಲಾಮಿತನದ  ಸಂಕೋಲೆ 
ಎದ್ದಷ್ಟು  ಗುದ್ದುಗಳು ಬೀಳುತ್ತಿವೆ, ಬರಲಾಗುತ್ತಿಲ್ಲ  ಮೇಲೆ 

 ಆ ಜಾತಿ, ಈ ಜಾತಿ, ದಿನಾ ಜಗಳ ಮೂತಿ ಮೂತಿ 
ಒಗ್ಗಟ್ಟು  ಸತ್ತು ಹೋಗಿ, ಪರಸ್ಪರ ನಂಬಿಕೆ ಅದೋ ಗತಿ 

ಟೋಪಿ ಹಾಕೋರು  ಸಾವಿರಾರು ನಾಯಕರುಗಳು 
ತಲೆ ಎತ್ತದೆ   ಸಾಗುವ , ಕೋಟಿ  ಮೂಕ ಕುರಿಗಳು

ಅಲ್ಲಲ್ಲಿ   ಬೆಳಕಿನ ನರ್ತನ  ,ಯುವ  ಮಿಂಚು ಹುಳಗಳು 
ಮಿಂಚಿನಂತೆ  ಮಾಯವಾಗುವ ಭರವಸೆಯ ಕಿರಣಗಳು 

ಈಗ ತಾನೇ ನಿದ್ದೆಯಿಂದ ಎದ್ದ ಮಗ ಕೇಳ್ತಾನೆ
ಸ್ವಾತಂತ್ರ ಸಿಕ್ಕಿದ್ದು ಯಾವಾಗ?  
ಒಂದು ದೊಡ್ಡ ಭಾಷಣ ಬರೆದು ಕೊಡು
ಪ್ರೈಜ್ ತಂದು ಬಿಡ್ತೀನಿ ಈವಾಗ !! ಅಂತಾನೆ 

ಕಣ್ಣ ಮುಂದೆ ಹುತಾತ್ಮರ  ಶೋಕ ಗೀತೆ 
ಈ ಸ್ವಾತಂತ್ರ  ಬೇಕಿತ್ತೇ ?  ಓ  ಭಾರತ ಮಾತೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು