ಪ್ರಿಯ ಕನ್ನಡಿಗರೇ
ಕನ್ನಡ ಓದಲು ಈ ಕೆಳಗಿನ ಕೊಂಡಿಗಳನ್ನೂ ಅಮುಕಿದರೆ ವಿಶ್ವ ಜಾಲದ ಕಿಂಡಿ ತೆರದು ಕೊಳ್ಳುತ್ತದೆ.
http://kanaja.in/ಕನ್ನಡ-ಜಾಲತಾಣಗಳು
http://kannadabloglist.blogspot.ae
ಓದಿರಿ, ಆನಂದಿಸಿರಿ , ಮಾಹಿತಿ ಪಡೆದು ಕೊಳ್ಳಿರಿ
ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು!
ಕಾಮನ ಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮನ ಮೈಮರೆಯುವುದು.
ಕನ್ನಡಾ! ಕನ್ನಡ, ಹಾ, ಸವಿಗನ್ನಡ!
ಕನ್ನಡದಲಿ ಹರಿ ಬರೆಯುವವನು;
ಕನ್ನಡದಲಿ ಹರ ತಿರಿಯುವನು!
ಕನ್ನಡದಲ್ಲಿಯೆ ಬಿನ್ನಹಗೈದೊಡೆ
ಹರಿ ವರಗಳ ಮಳೆ ಕರೆಯುವನು!
ಹರ ಮುರಿಯದೆ ತಾ ಪೊರೆಯುವನು!
ಬಾಳುವುದೇತಕೆ? ನುಡಿ, ಎಲೆ ಜೀವ;
ಸಿರಿಗನ್ನಡದಲಿ ಕವಿತೆಯ ಹಾಡೆ!
ಸಿರಿಗನ್ನಡದೇಳಿಗೆಯನು ನೋಡೆ:
ಕನ್ನಡ ತಾಯಿಯ ಸೇವೆಯ ಮಾಡೆ!
ಕುವೆಂಪು
0 ಕಾಮೆಂಟ್‌ಗಳು