ಮೂರು ಹನಿ


ಮುನಿಸು ಎಂದರೆ ಸಾವು
ಮನ್ನಿಸು ಅಂದರೆ ಬದುಕು

ದ್ವೇಷವೆಂದರೆ ಹಾವು
ಪ್ರೀತಿಯೆಂದರೆ ಹೂವು

ಇದು ಒಂದೇ ಜನ್ಮ ಕಣೋ
ನಿರಾಳವಾಗಿ ಬದುಕಿ ಬಿಡು

ಮನ ಬಿಚ್ಚಿ ಅತ್ತುಬಿಡು
ಎದೆದುಂಬಿ ನಕ್ಕುಬಿಡು

ಕಪಟದ ಮುಖವಾಡ ಕಳಚಿಕೋ
ಮುಗುಳ್ನಗುವಿನ ಬಾಳು ಕಟ್ಟಿಕೋ

ಬಂದ ದಾರಿಯನೊಮ್ಮೆ ಹಿಂತಿರುಗಿ ನೋಡು
ಕಲಿತ ಪಾಠದ ನೆನಪಿನಲಿ ಮುನ್ನಡಿ ಇಡು





ಸಸಿ ನೆಡೋಕೆ 
ಮರ ಬೆಳೆಸೋಕೆ 
ಯಾರೂ ಇಲ್ಲ

ಕಲ್ಲು ಹೊಡಿಯೋಕೆ 
ಹಣ್ಣು ತಿನ್ನೋಕೆ 
ನೂರಾರು ಜನ






ಮಾತೆಂದರೇನೆಂದು 
ಅರಿಯದವರು ಅಂದಂತೆ 
ಮಾತು ಬೆಳ್ಳಿ
ಮೌನ ಬಂಗಾರ.

ವಾಸ್ತವದಲ್ಲಿ 
ಮಾತಿಗಿಂತ 
ಮೌನವೇ ದೊಡ್ಡ ಕೊಲೆಗಾರ.
ಏಯ್ ಮೌನಿ 
ನೀನು ಮಹಾ ಪಾಪಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು