ಒಂದು ಜಿಜ್ಞಾಸೆ



ಕಷ್ಟ ಮತ್ತು ಬಡತನ ಕಲಿಸುವ ಪಾಠವನ್ನು ಯಾವ ಯೂನಿವರ್ಸಿಟಿ ಯಿಂದಲೂ ಕಲಿಯಲು ಸಾಧ್ಯವಿಲ್ಲ.
ಯೂನಿವರ್ಸಿಟಿಯ ಡಿಗ್ರಿ ಪಡೆದು ಏ ಸಿ ರೂಂ ನಲ್ಲಿ ಕೂತು, ಹೊಟ್ಟೆ ತುಂಬಾ ತಿಂದು ತೇಗಿ  ಸಿಕ್ಕ ಬಿಡುವಿನ ಅವಧಿಯಲ್ಲಿ  ಬಡತನ ನಿರ್ಮೂಲನದ ಬಗ್ಗೆ ಸ್ಕೆಚ್ ಮಾತ್ರ  ಹಾಕಿದ್ರೆ ಬಡತನ ನಿರ್ಮೂಲನವಾಗಲೂ ಸಾಧ್ಯವಿಲ್ಲ 

ಬಡತನವನ್ನು ಸ್ವಲ್ಪ /ಪೂರ್ಣ  ಮಟ್ಟಿಗೆ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ  ಹೋಗಲಾಡಿಸಬಹುದು. ಆದರೆ ಕಷ್ಟಗಳನ್ನು ಹಾಗೆ ಹೋಗಲಾಡಿಸಲಾಗುವುದಿಲ್ಲ. ಅದು ಯಾವ ಕ್ಷಣದಲ್ಲೂ  ದುತ್ತನೆ ಎದುರಾಗಬಹುದು. ಬಡತನ ಮುಗಿಯಿತು ಎನ್ನಬಹುದು  ಆದರೆ ಕಷ್ಟ ಮುಗಿಯಿತು ಎನ್ನಲಾಗುದಿಲ್ಲ. ಕಷ್ಟ ಮತ್ತು ಬಡತನ ಅನುಭವಿಸದ ಹೊರತು ಅದು ಯಾರಿಗೂ ಅರ್ಥವಾಗುವುದಿಲ್ಲ.


ಕಷ್ಟ ಮತ್ತು ಬಡತನಗಳಿಂದ ಹೊರಬರಲು ಸಹಕರಿಸಿದ ಎಲ್ಲರಿಗೂ ಕ್ರತಜ್ನತೆ ( ಜಶಕಲ್ಲಾಹ್ ) ಮತ್ತು ಅವುಗಳಿಂದ ಪಾರಾಗುವ ಹಾದಿ ತೋರಿದ ದೇವನಿಗೆ ಕ್ರತಜ್ನತೆ (ಅಲ್ ಹಮ್ದುಲಿಲ್ಲಃ ) ಎಂದು ಹೇಳಲು ಮಾತ್ರ  ನಾವು ಮರೆಯಬಾರದು .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು