ಮಿಲಿಟರಿ



ಅವನು ಓದಿನಲ್ಲಿ ಹಿಂದೆ ಇದ್ರೂ ಚಿತ್ರಕಲೆಯಲ್ಲಿ ಮುಂದೆ ಇದ್ದ . ಓದು ತಲೆಗೆ ಹತ್ತಲಿಲ್ಲವೋ ಏನೋ ಮುಂದುವರಿಸಲಾಗದೆ ಬಿಟ್ಟು ಬಿಟ್ಟ ಒಂದೈದು ವರ್ಷದ ತರುವಾಯ ಮತ್ತೆ ಸಿಕ್ಕಿದ್ದ . ತುಂಬಾ ಕುಶಲೋಪರಿಯಾಗಿ ಮಾತಾಡಿ ಮಿಲಿಟರಿ ಸೇರಿದ ವಿಷಯ ಹೇಳಿದ್ದ .'ಕಾಶ್ಮೀರದಲ್ಲಿ ಗಡಿ ಕಾಯುವ ಕೆಲಸ' ಎಂದಾಗ ಮೈ ಜುಮ್ಮಾಗಿ 'ಸಾಯೋ ಭಯ ಆಗುದಿಲ್ವೇನೋ' ಎಂದು ಮುಗ್ದನಾಗಿ ಕೇಳಿ ಬಿಟ್ಟಿದ್ದೆ .
"ಹೇ ಹಾಗೆನಿಲ್ಲಪ್ಪ .. ಹೇಗಿದ್ರೂ ಸಾಯೋರು ನಾವು .ದೇಶಕ್ಕಾಗಿ ಸಾಯೋ ಖುಷಿ ಬೇರೆ ಯಾವುದರಲ್ಲಿಯೂ ಸಿಗದು ಎಂದ" . ನಾನು ಕಣ್ಣು ಒದ್ದೆ ಮಾಡಿದಾಗ ಅವನು ನಕ್ಕು ಬಿಟ್ಟ .ನಾನು ಸಲ್ಯೂಟ್ ಹೊಡೆದು ಬಿಟ್ಟೆ. ಅಂದು ಬೀಳ್ಕೊಂಡ ಅವನು ಮತ್ತೆ ಸಿಗದೇ ಹನ್ನೆರಡು ವರ್ಷ ಆಯಿತು . ಇವತ್ತು ಬೆಳಿಗ್ಗೆ ಯಾಕೋ ನೆನಪಾದ . ಈಗ ಎಲ್ಲಿ ಹೇಗಿದ್ದಾನೋ ಗೊತ್ತಿಲ್ಲ .ಎಲ್ಲಿದ್ರೂ ಚೆನ್ನಾಗಿರಲಿ .

-ಉಫಾಕು-
‪#‎with‬ love & respect#

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು