೧.
ನಿಮ್ಮನ್ನು ಒಪ್ಪದ ಕಾರಣಕ್ಕೆ
ದ್ವೇಷಿಸಲು ನನಗೆ ಆಗುವುದಿಲ್ಲ
ಯಾಕೆಂದರೆ ನನ್ನ ಪ್ರವಾದಿ
ನನಗೆ ಹಾಗೆ ಮಾಡಲು ಕಲಿಸಿಲ್ಲ .
**
ಮುಗುಳ್ನಗು, ಸಲಾಂ ಹೇಳು
ಕರುಣೆ ತೋರು, ಪ್ರೀತಿಸು.
ಎಂದ ನನ್ನ ಮುತ್ತು ನೆಬಿಯ
ಧರ್ಮದಲ್ಲಿ ದ್ವೇಷವೆಂಬ ಪದವಿಲ್ಲ.
***
ಹುಟ್ಟುತ್ತಲೇ ಕೇಳಿದ ಹೆಸರದು
ಸಾವಿನವರೆಗೂ ಮರೆಯದು.
ಕಬರ್ ನ ಮಹಾ ಪ್ರಯಾಣದಿಂದ
ಹೌಲುಲ್ ಕೌಶರಿನವರೆಗಿನ ಬಂಧವದು.
****
ಹಗಲು ರಾತ್ರಿಗಳ ಪ್ರಾರ್ಥನೆಯಲ್ಲಿ
ಅವರ ಸಲಾತ್ ಸಲಾಂಗಳ ಉದ್ಗಾರ.
ಅಂತ್ಯ ಪ್ರವಾದಿಯ ನೆನಪಿಲ್ಲದ ದಿನ
ನನ್ನ ಹೃದಯದ ಅಂತ್ಯ ಸಂಸ್ಕಾರ.
೨.
ಲಕುಂ ದೀನುಕುಂ ವಲಿಯದೀನ್
ಸೌಹಾರ್ದದ ತತ್ವ ಭೋದಿಸಿದವರು.
ಇಹ್ದಿನ ಸಿರಾತಲ್ ಮುಸ್ತಕೀಂ
ಸನ್ಮಾರ್ಗದ ಹಾದಿಗೆ ಕರೆದವರು.
**
ದೇವಾ,ನೂರಾರು ಪಾಪಗಳ ಸರದಾರ ನಾನು.
ನೆಬಿಚರ್ಯೆ ಪಾಲಿಸಲು ಅನುಗ್ರಹಿಸು ನನ್ನನು.
ಚರಿತ್ರೆಯ ಪುಟಗಳನ್ನು ಮತ್ತೆ ನನಗೆ ಓದಿಸು.
ಪ್ರವಾದಿ ಪ್ರೇಮ ಕಣಕಣದಲ್ಲೂ ತುಂಬಿಸು.
***
ಅಬೂಜಹಲ ಅಬೂಲಹಬರ ಸಂತತಿಗಳು
ಪರಮ ಸತ್ಯವನ್ನು ಇನ್ನಾದರೂ ಅರಿಯಲಿ.
ವಿಶ್ವ ಪ್ರವಾದಿಯ ಶಾಂತಿ ತತ್ವದ ಬೆಳಕಿಗೆ
ಪ್ರತಿದಿನವೂ ಸರ್ವರ ಮನೆ ಮನ ಬೆಳಗಲಿ.
ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್.....
#ಉಫಾಕು# with love#
0 ಕಾಮೆಂಟ್‌ಗಳು