ಹನಿ ಹನಿ ಸಾತ್ ಕಹಾನಿ

                                             ಹನಿ ಹನಿ - ಸಾತ್ ಕಹಾನಿ



 


 ೧. ಇಬ್ಬರು ತಾಯಂದಿರು ಕಣ್ಣೀರಿಟ್ಟರು, ಒಬ್ಬರು ಯುದ್ಧದಲ್ಲಿ ಗೆದ್ದು ಮಗನನ್ನು ಕಳೆದುಕೊಂಡಿದ್ದರು.  ಇನ್ನೊಬ್ಬರು ಯುದ್ದದಲ್ಲಿ ಸೋತು  ಮಗನನ್ನು ಕಳೆದುಕೊಂಡಿದ್ದರು.

 

೨. ಆಯಿತು ಮಗ ನಾಳೆ ಬೆಳಿಗ್ಗೆ ಮತ್ತೆ ನೋಡೋಣ” ಎಂದು ಆ ತಾಯಿ ತನ್ನನ್ನು  ವೃದ್ಧಾಶ್ರಮಕ್ಕೆ ಇಳಿಸಿ ಹೋದ ತನ್ನ ಮಗನಿಗೆ ಹೇಳಿದರು.

 

೩. ಅವನು ತಾನು ಜನಿಸಿದ ದಿನ ಜೋರಾಗಿ ಅತ್ತಾಗ  ಅವಳು ಸಂತೋಷದಿಂದ ಆನಂದಿಸುತ್ತಿದ್ದಳು..  ಏಕೆಂದರೆ ಅದು ಆ ದಿನ ಅವಳ ಮೊದಲ ಹೆರಿಗೆಯ  ಮೊದಲ ಮಗುವಾಗಿತ್ತು.

 

೪. ಆ ಮನೆಯ ಯಜಮಾನ ತಮ್ಮ ಕುಟುಂಬಕ್ಕೆ ಇನ್ನೂ ಜೀವಂತವಾಗಿದ್ದಾರೆ.  ಏಕೆಂದರೆ ಮೂರು ದಿನಗಳ ಹಿಂದೆ ತೀರಿ ಹೋದ ಅವರ  ಮೃತದೇಹ ವೆಂಟಿಲೇಟರ್‌ನಲ್ಲಿ ಆ ಆಸ್ಪತ್ರೆಯ ಆದಾಯವನ್ನು ಹೆಚ್ಚಿಸುತ್ತಿದೆ.

 

೫. ''ಪ್ರಿಯೆ ನೀನು ಇಂದೂ ಕೂಡ ಬಹಳ ಸುಂದರವಾಗಿ ಕಾಣುತ್ತಿರುವಿ" ಎಂದು ಕುರುಡ ಪತಿ ತನ್ನ ದಿವಂಗತ ಹೆಂಡತಿಯ ಸಮಾಧಿಯ ಬಳಿ ಹೇಳುತ್ತಾ ಆಳುತ್ತಿದ್ದನು.

 

೬. ನೀವಿಬ್ಬರೂ ಆದಷ್ಟು ಬೇಗ ಈ ದಾಖಲೆಗಳ ಮೇಲೆ ಸಹಿ ಮಾಡಿರಿ.  ಮುಂದಿನ ಜೋಡಿ ಕೂಡ  ನಿಮ್ಮ ಹಾಗೆ ಬೇಗ ಬೇರೆಯಾಗಲು  ಹೊರಗೆ ಕಾಯುತ್ತಿದ್ದಾರೆ ಎಂದು ವಕೀಲರು ಹೇಳಿದರು.

 

೭. ಅದು ಹಗಲಿನಲ್ಲಿ ಗಜಿ ಬಿಜಿಯ  ಬಸ್ ನಿಲ್ದಾಣವಾಗಿತ್ತು.  ರಾತ್ರಿಯಲ್ಲಿ  ಬೀದಿ ಬದಿಯ  ಮಕ್ಕಳು ಆ ತಂಗುದಾಣವನ್ನು  ತಮ್ಮ ತಣ್ಣನೆಯ  ಮನೆ ಮಾಡಿಕೊಂಡಿದ್ದರು.

 

ಮೂಲ: ಆಂಗ್ಲ 

ಬರಹಗಾರ : ಅನಾಮಿಕ

ಅನುವಾದ : ಉಫಾಕು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು