ಮಕ್ಕಳನ್ನು ಮಕ್ಕಳಂತೆ ಇರಲು ಬಿಡಿ




ಈಗ ಸ್ಪರ್ಧಾತ್ಮಕ ಯುಗ. ಎಲ್ಲದಕ್ಕೂ ಪೈಪೋಟಿ. ಮಗು ಹುಟ್ಟುವ ಮುನ್ನವೇ ಸ್ಕೂಲ್ ಸೀಟ್ಗೆ ಬುಕಿಂಗ್ ಮಾಡುವ ಕಾಲ. ಹುಟ್ಟಿದ ಮಗು ಕೂಡ ತನ್ನ ಬಾಲ್ಯವನ್ನು ಸರಿಯಾಗಿ ಸವಿಯಲು ಬಿಡದೆ ಸರತಿ ಸಾಲಿನಲ್ಲಿ ನಿಂತು ಕಂಡಿಸನ್ ಗೆ ಒಳಪಡುವಾಗ "ಯಾಕಪ್ಪಾ ಈ ಭೂಮಿಗೆ ಬಂದೆ ?" ಎಂದು ಕೇಳುವ ಕಾಲ. ಬೇಬಿ ಸಿಟ್ಟಿಂಗ್ , ನರ್ಸರಿ, ಪ್ರೀ ಕೆ ಜಿ , ಯು ಕೆ ಜಿ , ದಾಟಿ ಒಂದನೇ  ಇಯ್ಯತ್ತೆಗೆ ಬರುವಾಗಲೇ ಮಗು ಈ ಜಂಜಾಟಕ್ಕೆ ಬಳಲಿ ಬೆಂಡಾಗಿ ಬಿಡುತ್ತದೆ.

ಮಗುವಿನ ಹಂತವನ್ನು ದಾಟಿ,ಬೆಳೆದು ಬಂದ ನಾವು ನಮ್ಮ ಬಾಲ್ಯದ ಸಾವಿರ ನೆನಪುಗಳ ಗಂಟು ಮೂಟೆಗಳನ್ನು ಆಗಾಗ ಬಿಚ್ಚಿ ಖುಷಿ ಪಡುವಾಗ, ನಮ್ಮ ಮಕ್ಕಳಿಗೆ ಅಂತ ಬಾಲ್ಯವನ್ನು ಕೊಡಲು ಯಾಕೆ ತಯಾರಿಲ್ಲ? ನಮ್ಮ ಗತ್ತು, ಗೈರತ್ತುಗಳಿಗೆ, ಹಮ್ಮು ಬಿಮ್ಮುಗಳಿಗೆ ಮಕ್ಕಳನ್ನು ಬಲಿ ಕೊಡುವುದು ಸರಿಯೇ ? ಎಂದು ನಾವು ಯಾಕೆ ಯೋಚಿಸುವುದಿಲ್ಲ. ಮಕ್ಕಳ ಉತ್ತಮ  ಭವಿಷ್ಯಕ್ಕೆ  , ಮಕ್ಕಳ ಒಳ್ಳೆಯದಕ್ಕೆ ಎಂದು ಸಬೂಬು ನೀಡಿ ಎರಡು ಮೂರು ವರ್ಷಕ್ಕೆ ನರ್ಸರಿಗೆ  ಸೇರಿಸುವ ನಾವು ಅವರಿಗೆ ಇಷ್ಟವಾದ ಬಾಲ್ಯ ಸಹಜ ಖುಷಿ , ಆಟಗಳನ್ನು ಕಸಿದು ಕೊಳ್ಳುವುದು ಸಮರ್ಥನೀಯವೇ ?

ಅಷ್ಟಕ್ಕೂ  ಮಗುವನ್ನು ಶಾಲೆಗೆ ಸೇರಿಸಬೇಕಾದ ಸರಿಯಾದ ವಯಸ್ಸು ಯಾವುದು ? ಸಾಮಾಜಿಕ ತಜ್ಞರು, ಶಿಕ್ಷಣ ತಜ್ಞರು, ಮಾನಸಿಕ ತಜ್ಞರು , ಮಕ್ಕಳ ಬಗ್ಗೆ ಕಳಕಳಿಯುಳ್ಳ ಸಹ್ರದಯಿಗಳು  ಈ ಬಗ್ಗೆ ಚರ್ಚೆ ಮಾಡಿ ಒಂದು ಉತ್ತಮ ನಿರ್ಧಾರಕ್ಕೆ ಬರಬೇಕಾಗಿದೆ..ಮಕ್ಕಳನ್ನು ಮಕ್ಕಳಂತೆ ಇರಲು ,ಆವರ ಮುಗ್ದ ಬಾಲ್ಯವನ್ನುನಮ್ಮ ಸ್ವಾರ್ಥಕ್ಕಾಗಿ ಕಸಿಯದಿರುವ ಮನಸ್ಸು ನಾವೆಲ್ಲಾ ತೋರಬೇಕಾಗಿದೆ.

#ಉಫಾಕು#  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು