ದೇವರ ಹೆಣ



ಪ್ರಪಂಚ ಎಲ್ಲೋ ಹೋಗ್ತಾ ಇದೆ. ಟೆಕ್ನಾಲಜಿಗಳನ್ನು ಬಳಸ್ಕೊಂಡು ಎಲ್ಲ ದೇಶಗಳು ಮುಂದುವರಿಯೋ ಪ್ರಯತ್ನ ಮಾಡ್ತಾ ಇವೆ . ಬಾಂಬು ಬಿದ್ದ ಜಪಾನ್ ಎದ್ದು ನಿಂತಿದೆ . ಸಡ್ಡು ಹೊಡೆಯುವಂತೆ ಪಕ್ಕದ ಚೈನಾ ಬೆಳೆಯುತ್ತಿದೆ. ಅಗಾಧ ಮಾನವ ಸಂಪನ್ಮೂಲ ಹೊಂದಿದ ನಾವು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವ್ರದ್ದಿಯಾಗೋದು ಬಿಟ್ಟು ಧರ್ಮದ ಕೊಳ್ಳಿ ಹಿಡಿದು ದೇಶವನ್ನು ನಾಶ ಮಾಡಲು ಹೊರಟಿದ್ದೇವೆ.ಸಾವಿರ ಸಮಸ್ಯೆಗಳು ಗುಡ್ಡ ಬಿದ್ದಿರುವಾಗ ಯಾರು ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವ ಖಾಸಗಿ ವಿಷಯಗಳನ್ನು ಕಾನೂನಿನ ಮೂಲಕ ಹತ್ತಿಕ್ಕುವ ವ್ಯರ್ಥ ಪ್ರಯತ್ನ ಮಾಡಿ ಜಗತ್ತಿನ ಎದುರು ಹಾಸ್ಯಾಸ್ಪದವಾಗುತ್ತಿದ್ದೇವೆ.

ಯಾಕೋ ನನಗೆ ನನ್ನ PUC ಯಲ್ಲಿ ಓದಿದ ಕುಂವಿ ಯವರ 'ದೇವರ ಹೆಣ" ನೆನಪಾಗುತ್ತದೆ. ಅದರ ಕಥಾ ನಾಯಕ ಠೊಣ್ಣಿ ಮತ್ತೆ ಮನದೊಳಗೆ ಬರುತ್ತಾನೆ.ತನ್ನ ಆಹಾರದ ಹಕ್ಕನ್ನು ಕಸಿದಾಗ ಅವನಲ್ಲಿ ಉಂಟಾಗುವ ತಳಮಳ, ಆಕ್ರೋಶ ಈಗ ಸಾರ್ವತ್ರಿಕವಾಗುತ್ತಿದೆ.

ಕುಂವಿ ಯವರ ದೇವರ ಹೆಣ ಈಗ ಪ್ರಸ್ತುತವಾಗುತ್ತಿದೆ. ಅದನ್ನು ಮನ ಮುಟ್ಟುವ ರೀತಿಯಲ್ಲಿ ಅರ್ಥೈಸಿದ ಇಸಾಕ್ ಸರ್ ಕೂಡ ಕಣ್ಣ ಮುಂದೆ ಬರ್ತಾರೆ . ಬಿಡುವು ಸಿಕ್ಕಾಗ ದೇವರ ಹೆಣ ಓದಲು ಮರೆಯದಿರಿ.

#ಉಪಾಕು#



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು