ನಿಜವಾದ ಪ್ರಜಾಪ್ರಭುತ್ವ ಎಂದರೇನು ?



ನಿಜವಾದ ಪ್ರಜಾಪ್ರಭುತ್ವ ಎಂದರೇನು ?

ಸಂವಿಧಾನ ರಚಿಸಿದ ಬಾಬಾಸಾಹೇಬ್ ಡಾ.ಅಂಬೇಡ್ಕರರ ಪ್ರಕಾರ ‘‘ಪ್ರಜಾಪ್ರಭುತ್ವವೆಂದರೆ  ಹಲವು ಜನರು ಒಂದೆಡೆ ಸಹಯೋಗದಿಂದ ಒಟ್ಟಾಗಿ ಜೀವಿಸುವ ಜೀವನ ವಿಧಾನ’’ ನಮ್ಮ ದೇಶದಲ್ಲಿ ಅಂಥ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ? ಪ್ರಜೆಗಳ ಹಿತಾಶಕ್ತಿಯನ್ನು ಕಡೆಗಣಿಸಿ,ತಮಗೆ ಬೇಕಾದಂತೆ ಆಡಳಿತ ನಡೆಸಿದ ಮಾತ್ರಕ್ಕೆ ಪ್ರಜಾಪ್ರಭುತ್ವ  ಯಶಸ್ವಿಯಾಗುತ್ತದೆಯೇ ? ಮತ ಹಾಕಿ ಒಬ್ಬನನ್ನು ಜನ ಪ್ರತಿನಿದಿಯನ್ನಾಗಿ ಮಾಡಿ, ಅವನ ಮೂಲಕ ಜಿಲ್ಲೆಯ, ರಾಜ್ಯದ, ರಾಷ್ಟ್ರ ದ ನಾಯಕನನ್ನಾಗಿ ನೇಮಕ ಮಾಡಿ ನಮ್ಮನ್ನು ಆಳುವ ಅಧಿಕಾರ ಕೊಟ್ಟ ಮಾತ್ರಕ್ಕೆ ಪ್ರಜಾಪ್ರಭುತ್ವದ ನಮ್ಮ ಜವಾಬ್ಧಾರಿ ಮುಗಿದು ಹೋಯಿತೇ ?

ರಾಜಕೀಯವೆಂಬುದು ಕೆಲಸವಿಲ್ಲದವರ ಕೆಲಸವೇ ? ರಾಜಕೀಯ ಕೇವಲ ಸೋಮಾರಿಕಟ್ಟೆಯ ಮಾತು ಮತ್ತು ಚರ್ಚೆಗೆ ಸೀಮಿತವಾದ ವಿಷಯವೇ ? ಅಪರಾಧಿ ಹಿನ್ನೆಲೆ ಉಳ್ಳವರ ಸಂಖ್ಯೆ  ಜನ ಪ್ರತಿನಿಧಿ ಸಭೆಯಲ್ಲಿ ಹೆಚ್ಚಳವಾಗುತ್ತಿರುವ ಈ ಕಾಲದಲ್ಲಿ ಇದು ಗಂಭೀರವಾಗಿ ಯೋಚಿಸಬೇಕಾಗಿದೆ

ಪಟ್ಟ ಭದ್ರರ ಸ್ವಾರ್ಥ ಹಿತಾಶಕ್ತಿಗೆ ನಮ್ಮ ದೇಶ ಬಲಿಯಾಗದಿರಲಿ ಎಂಬುದೇ ನನ್ನ ಆಶಯ ಮತ್ತು ಪ್ರಾರ್ಥನೆ .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು