ನನ್ನನ್ನು ಕಾಪಾಡಿ


ದೇವಾ.... 

ನರ ಸತ್ತ ರಕ್ಕಸರ ನಡುವೆ,
ಹುಚ್ಚು  ನಾಯಿಯಂತೆ 
ಜೊಲ್ಲು ಸುರಿಸುವವರ ನಡುವೆ,
ಕಣ್ಣಿದ್ದು ಕುರುಡಾದ ವ್ಯವಸ್ಥೆಯ ನಡುವೆ,
ಹಾದಿ ಬೀದಿಯಲ್ಲಿ  ಇಣುಕಿ ನೋಡುವ
ಕಾಮ ಪಿಶಾಚಿಗಳ ನಡುವೆ,
ಬದುಕಲಾಗದೆ ಪ್ರತೀ ಕ್ಷಣ ಸಾಯುತ್ತಿದ್ದೇನೆ.

ಅಮ್ಮ ,ಅಕ್ಕ 
ತಂಗಿ, ಮಗಳು,ಪ್ರಿಯೆ  
ಮಾತೆ, ಮಮತೆ 
ಕರುಣೆ .ಸಹನೆ 
ಹೀಗೆ ನೂರಾರು ಹೆಸರು ಕೊಟ್ಟವರ 
ನಕಲಿ ಮುಖವಾಡವ ನಂಬಿಕೆಟ್ಟಿ ದ್ದೇನೆ 

ಪುಲ್ಲಿಂಗದ ದರ್ಪದಿಂದ 
ಮದ ಉನ್ಮತ್ತರಾಗಿ ಬರುವವರ  
ಲಿಂಗವನ್ನೇ ಕೊಚ್ಚಿ ಬಿಡಲು
ನನ್ನೆದೆಯ ನೋವಿನ ಕಿಚ್ಚು ಆರಿ ಬಿಡಲು  
ಸ್ತ್ರೀ ಎಂದರೆ ಏನೆಂದು ತೋರಿಸಿ ಕೊಡಲು 
ನನಗೊಂದು ಮಚ್ಚು ಕೊಡು.
ಅನ್ಯಾಯ ಎದುರಿಸಲು ಕೆಚ್ಚೆದೆಯ  ಶಕ್ತಿ ಕೊಡು.

--ಫಾರೂಖ್ ಕುಕ್ಕಾಜೆ --

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು