ದೇಶವೇ ಬೆಚ್ಚಿ ಬೀಳಿಸಿದ ದೆಹಲಿಯ ಅತ್ಯಾಚಾರಿ ರಣಧೀರನಂತೆ ಹೇಳಿಕೆ ನೀಡ್ತಾನೆ. ಅತ್ಯಾಚಾರ ನಡೆದಾಗ ಎದ್ದು ನಿಲ್ಲುವ ನಾವು ದಿನಗಳ ನಂತರ ಮರೆತು ಬಿಡ್ತೇವೆ . ಗಲ್ಲಿ ಗಲ್ಲಿಯಿಂದ ಕೇಳಿಬರುವ ನಮ್ಮ ನ್ಯಾಯದ ಬೇಡಿಕೆಯ ದ್ವನಿಯು ವಿಳಂಬಿತ ನ್ಯಾಯದಿಂದಾಗಿ ಸುರಕ್ಷತೆಯ ಭರವಸೆ ಕಳೆದುಕೊಳ್ಳುತ್ತೇವೆ.
"ಯಾರದ್ದೋ ಮನೆಯ ಉಷಾಬರಿ ನಮಗ್ಯಾಕೆ" ಅನ್ನುವ ನಾವು ಕೆಲವರು, ನಮ್ಮ ಮನೆಯ ಅಂಗಳಕ್ಕೆ ಕಾಮ ಪಿಶಾಚಿ ಕಾಲಿಟ್ಟಾಗ ಮಾತ್ರ ವಾಸ್ತವ ಅರಿತವರಂತೆ ಲಬೋ ಲಬೋ ಅನ್ತ ಬಾಯಿ ಬಡ್ಕೋತೀವಿ.ಯಾರು ಸತ್ತರೂ ಜಾತಿ ನೋಡ್ತೀವಿ.
ಆರ್ಥಿಕತೆಯನ್ನು ಬಲ ಪಡಿಸಿ ಸಮರ್ಥ ದೇಶವಾಗುವ ಬದಲು ಧರ್ಮದ ಹೆಸರಲ್ಲಿ ರಾಜಕೀಯ ಮಾಡಿ ದೇಶದ ಏಕತೆಯನ್ನು ಶಿಥಿಲಗೊಳಿಸ್ತಾ ಇದ್ದೀವಿ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಅನ್ನುತ್ತೇವೆ.
ಹೆಣ್ಣು ದಿನಾ ವರಧಕ್ಷಿಣೆ.ಅತ್ಯಾಚಾರಕ್ಕೆ ಬಲಿಯಾಗುತ್ತಿರುವಾಗ ತಮ್ಮದು Incredible India ಅಂತ ಹೇಳಿ ವಿದೇಶಿಗಳನ್ನು ಸ್ವಾಗತ ಮಾಡ್ತೀವಿ.ಇರುವ ಸಮಸ್ಯೆಗಳನ್ನು ಪರಿಹರಿಸುವ ಬದಲು ಹೊಸ ಸಮಸ್ಯೆ ಹುಟ್ಟು ಹಾಕಿ ಮೇರ ಭಾರತ್ ಮಹಾನ್ ಅಂತ ಕೊಚ್ಚಿ ಕೊಳ್ತೀವಿ.
ನಾವ್ಯಾಕೆ ಹೀಗೆ???

0 ಕಾಮೆಂಟ್‌ಗಳು