ನಿಮ್ಮ ಮತ -ನಿಮ್ಮ ಹಕ್ಕು




ಗ್ರಾಮ ಪಂಚಾಯತ್ ಚುನಾವಣೆ ಮತ್ತೆ ಬಂದಿದೆ. ಚುನಾವಣೆ ಬರ್ತಾ,ಹೋಗ್ತಾ ಇರ್ತದೆ .ಒಂದೈನೂರು ಯಾ ಎಂಟ್ನೂರು ಯಾ ಸಾವಿರ ತಗೊಂಡು, ಒಂದಷ್ಟು ಬೊಬ್ಬೆ ಹಾಕಿ , ನಾಲ್ಕೈದು ಗಲ್ಲಿ ಸುತ್ತಿ ಬಂದು, ಯಾರದೋ ಮರ್ಜಿಗೆ ಯಾರಿಗೋ ಓಟು ಕೊಟ್ಟು ಬಿಟ್ಟರೆ ನಮ್ಮ ಕರ್ತವ್ಯ ಮುಗೀತು ಅಂತ ನಾವು ತಿಳ್ಕೊಂಡ್ರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ . ಪ್ರಜಾಪ್ರಭುತ್ವ ವ್ಯವಸ್ಥೆ ಈಗಿನ ಧರಿದ್ರ ಮಟ್ಟಕ್ಕೆ ಇಳಿಯಲು ನಮ್ಮ ಸೋಗಲಾಡಿತನವೇ  ಪರೋಕ್ಷ ಕಾರಣ ಎಂದು ಅರಿಯುವಲ್ಲಿ ನಾವು ಸೋತು ಹೋಗಿದ್ದೇವೆ . ಈ ಸೋಲು ಬರೀ ನಮ್ಮ ವೈಯಕ್ತಿಕ ಸೋಲಾಗದೆ ದೇಶದ ಸೋಲಾಗಿ ಪರಿವರ್ತನೆಯಾದದ್ದು ದುರಂತ ಎನ್ನದೆ ವಿಧಿ ಇಲ್ಲ .

ಜನಜೀವನಕ್ಕೆ ಆವಶ್ಯಕವಾದ ಪ್ರಾಥಮಿಕ ಆವಶ್ಯಕತೆಗಳನ್ನು ಒದಗಿಸುವ, ಸಾರ್ವಜನಿಕರ ಅಹವಾಲುಗಳಿಗೆ ಕಿವಿಯಾಗುವ ಮಂಡಲ ಪಂಚಾಯತ್ ಬರಬೇಕಾಗಿದೆ. ಪ್ರತಿ ಹಳ್ಳಿಗೂ ಸಮರ್ಪಕ ರಸ್ತೆ , ವಿದ್ಯುತ್ ,ಪ್ರತೀ ಮನೆಗೂ ಸೌಚಾಲಯ, ಕುಡಿಯುವ ನೀರು ಒದಗಬೇಕು ಸುಸಜ್ಜಿತ ಗ್ರಂಥಾಲಯ, ಸಕ್ರೀಯವಾದ ಯುವಕ ಮಂಡಲ, ಯುವತಿ ಮಂಡಲ ನಿರ್ಮಾಣವಾಗಬೇಕಾಗಿದೆ. ಐದು ವರ್ಷಕೂಮ್ಮ್ಮೆ ನಡೆಯುವ ಈ ಪಂಚಾಯತ್ ಚುನಾವಣೆ ಊರ ಜಾತ್ರೆಯಾಗದೆ ಗ್ರಾಮಭಿವ್ರದ್ದಿಯ ಕಡೆಗಿನ ಯಾತ್ರೆಯಾಗಬೇಕಾಗಿದೆ .

ಜಾತೀಯವಾದದ ಮಾರಕ ಭಾರತ, ಜಾತ್ಯತೀತತೆಯ ಮುಖವಾಡದ ಭಾರತ ,ಬಂಡವಾಳಶಾಹಿಗಳ ಸ್ವಾರ್ಥ ಭಾರತಕ್ಕಿಂತ ನಮಗೀಗ ಸಹಬಾಳ್ವೆ,ನಂಬಿಕೆ,ಶಾಂತಿಯ ಭಾರತ ಬೇಕಾಗಿದೆ . ಸಂಕುಚಿತವಾದದೊಂದಿಗೆ ನರಳಿ ಸಾಯುವ ಭಾರತಕ್ಕಿಂತ ವಿಶಾಲ ಮನಸ್ಸಿನ ವಿಕಾಶದ, ಅಭಿವ್ರದ್ದಿಯ ಭಾರತವನ್ನು ನಾವೆಲ್ಲಾ ಸೇರಿ ನಿರ್ಮಿಸ ಬೇಕಾಗಿದೆ.ಹಳ್ಳಿಗಳ ದೇಶವಾದ ನಮ್ಮ ಭಾರತ  ಪುರೋಗತಿ ಕಾಣ ಬೇಕಾದರೆ . ನಾವು ಕಟ್ಟಿದ ಟ್ಯಾಕ್ಸ್ , ಹಾಕಿದ ಓಟು ಪ್ರಯೋಜನಕ್ಕೆ ಸಿಗಬೇಕಾದರೆ ,ಅರ್ಹರನ್ನು ಮಾತ್ರ ಚುನಾಯಿಸಬೇಕಾಗಿದೆ.

ಕೊನೆಯದಾಗಿ ಒಂದು ಅಭ್ಯರ್ಥನೆ -ಮತದಾನ ಒಂದು ಭಾಗ್ಯ. ಅದನ್ನು ಅರ್ಹರಿಗೆ ಮಾತ್ರ ನೀಡಿ ಪುಣ್ಯ ಕಟ್ಟಿಕೊಳ್ಳಿ.

ಫಾರೂಖ್ ಕುಕ್ಕಾಜೆ- #ಜೈ ಭಾರತ #

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು