ಹಿರಿಯರನ್ನು ಗೌರವಿಸಿ



ಅದು ಮಗ್ರಿಬ್ ನ ಸಮಯ .೬೦ ವಯಸ್ಸು ಮೀರಿದ ಹಿರಿಯರೊಬ್ಬರು ಮಸೀದಿಗೆ ಪ್ರಾರ್ಥನೆಗೆಂದು ಮೆಲ್ಲನೆ ನಡೆಯುತ್ತಾ ಬರ್ತಾ ಇದ್ದರು . ನನಗಿಂತ ಪ್ರಾಯದಲ್ಲಿ ಮೂರು-ನಾಲ್ಕು ವರ್ಷ ದೊಡ್ಡವರಾದ ತುಂಟ ಹುಡುಗರ ಗುಂಪೊಂದು ಬೆನ್ನು ಬಾಗಿಸಿ ನಡೆಯುತ್ತಿದ್ದ ಅವರನ್ನು "ಅಜ್ಜ ಅಜ್ಜ.. ಕುದುರೆಗೆ ರೇಟ್ ಎಷ್ಟು?" ಎಂದು ಕೇಳುತ್ತಾ ಮಿತಿ ಮೀರಿದ ತಮಾಷೆ ಮಾಡ್ತಾ ಇತ್ತು .ಯಾವುದನ್ನೂ ಕೇಳಿಸಿಕೊಳ್ಳದೆ ಆ ವ್ರದ್ದರು ಮಸೀದಿಯೊಳಗೆ ಹೊಕ್ಕು ಪ್ರಾರ್ಥನೆ ಮಾಡಿದ ನಂತರ ಹೊರಡಲು ಅನುವಾದಾಗ "ಅಜ್ಜಾ ಅವರು ಅಷ್ಟು ತಮಾಷೆ ಮಾಡಿದ್ರು ನೀವ್ಯಾಕೆ ಜೋರು ಮಾಡಿಲ್ಲ?" ಎಂದು ಕೇಳಿದೆ.

ಅವರು ಮೆಲ್ಲನೆ ಶಾಂತವಾಗಿ 'ಆ ಮಕ್ಕಳಿಗೆ ಕುದುರೆಯ ರೇಟ್ ಗೊತ್ತಾಗೋಕೆ ಇನ್ನು ೪೦-೫೦ ವರ್ಷ ಬೇಕು. ಅದಕ್ಕೆ ಸುಮ್ಮನಿದ್ದೆ' ಅಂದ್ರು.ಅವರ ಮಾತಿನ ತಲೆ ಬುಡ ಅರ್ಥವಾಗದ ನಾನು ಆ ದಿನದ ಮದ್ರಸದ ಪಾಠದ ಕಡೆಗೆ ನಡೆದೆ. ಅವರ ಮಾತಿನ ಅರ್ಥ ೧೦ ವರ್ಷದ ನಂತರ ಮನದಟ್ಟಾಗಿತ್ತು.

ಬೆನ್ನು ಬಾಗಿದ ಹಿರಿಯರನ್ನು ಕಂಡಾಗಲೆಲ್ಲ ೨೫ ವರ್ಷ ಹಿಂದಿನ ಆ ದಿನ ಮತ್ತೆ ಮನದಲ್ಲಿ ಸುಳಿದು ಹೋಗುತ್ತದೆ.

# ಫಾರೂಖ್ ಕುಕ್ಕಾಜೆ # 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು