
ಇವತ್ತು FB ವಾಲ್ನಲ್ಲಿ ಕೆಲವು ಸ್ಟೇಟಸ್ ನೋಡಿದಾಗ ಅನಿಸಿದ್ದು :-
ಇದೆಲ್ಲ ಇವತ್ತೇ ಯಾಕೆ ನೆನಪಾಯಿತು ? ಅನ್ನೋರಿಗೆ :-
ತೀರಿ ಹೋದ ಮನೆಯ ಹಿರಿಯನ ನೆನಪಿಗೆ ಎಲ್ಲಾ ದಿನ ಎಲ್ಲರನ್ನೂ ಕರೆದು ಅನ್ನದಾನ ಮಾಡುವುದಿಲ್ಲ ….
ಮದುವೆ ಆದ ಕುಶಿಗೆ ಎಲ್ಲಾ ದಿನ ಊರೆಲ್ಲ ಸೇರಿಸಿ ಭೂರಿ ಬೋಜನ ಕೊಡುವುದಿಲ್ಲ ….
ವರ್ಷಕ್ಕೆ ಒಂದು ಸಲ ನೆನಪು ಮಾಡಿಕೊಂಡು ಅನ್ನದಾನ ಅಥವಾ ಪಾರ್ಟಿ ಮಾಡ್ತಾರೆ …
So, ಕೆಲವು ದಿನಕ್ಕೆ ಅದರದ್ದೇ ಮಹತ್ವ ಮತ್ತು ಗೌರವ ಇದೆ. ಅದನ್ನು ಅರಿತು ಕೊಂಡವರಿಗೆ ಮಾತ್ರ ಆ ದಿನದ ಗಂಭೀರತೆ ಅರ್ಥವಾಗುತ್ತದೆ.
ಗಮನವಿರಲಿ :-
ಮಂದಿರ ಮಸೀದಿ ಕಟ್ಟುವ ಮುನ್ನ
ಈ ದೇಶದ ಮನಸ್ಸು ಕಟ್ಟಬೇಕಾಗಿದೆ
ದೇಶ ಭಾಂದವರ ನಡುವೆ ಅಜರಾಮರ
ಪ್ರೀತಿ ಸ್ನೇಹಗಳ ಬೀಜ ಬಿತ್ತಬೇಕಾಗಿದೆ
ನೆನಪಿರಲಿ :-
ಉದ್ರೇಕದ ಸ್ಖಲನಕ್ಕೆ ಕೇವಲ ಕೆಲವು ಕ್ಷಣಗಳ ಆಯುಷ್ಯ
ಅವಿವೇಕಕ್ಕೆ ಬಲಿಯಾಗದಿರಲಿ ಹೊಸ ಬೀಜಗಳ ಭವಿಷ್ಯ.
0 ಕಾಮೆಂಟ್‌ಗಳು