ತುಣು ತುಣುಕು



ಹುಡುಗಿಯರೊಂದಿಗೆ ಸಭ್ಯತೆಯಿಂದ ವರ್ತಿಸಿರಿ.

ಎಂದು ಪ್ರಾಧ್ಯಾಪಕರು ತರಗತಿಯಲ್ಲಿ ಹೇಳಿದರು.

ಸೀಟಿ ಹೊಡೆದು ಹುಡುಗಿಯರನ್ನು ಕರೆದ ಹುಡುಗರು
ಏ ಬುಲ್ ಬುಲ್ ಮಾತಾಡಕಿಲ್ವಾ? ಎಂದು ಕೇಳಿದರು

ಒಂದು ದಿನ ಯಾವುದೋ ಕಾರಣಕ್ಕೆ ಅಳುತ್ತಿದ್ದವನನ್ನು
ಅಮ್ಮ ಹತ್ತಿರ ಕರೆದು ತಲೆ ನೇವರಿಸಿ
"ನೀನು ಗಂಡು ಮಗು ಅಳಬಾರದು"
ಎಂದ ಮೇಲೆ ಅವನು ಪಬ್ಲಿಕ್ ಆಗಿ ಎಂದೂ ಅತ್ತದ್ದೇ ಇಲ್ಲ.


ಕಾರು ಬಂಗಲೆ ಇದ್ದ ಶ್ರೀಮಂತನೊಬ್ಬ ತ
ನಗೆ BPL ಕಾರ್ಡ್ ಕೊಡಲಿಲ್ಲವೆಂದು
 ದುಃಖ್ಖದಿಂದ ಕೂಗುತ್ತಿದ್ದ.

ಜೋಪಡಿ ಮಾತ್ರ ಇದ್ದ ಬಡವನೊಬ್ಬನು
 ತನಗೆ APL ಕಾರ್ಡ್ ಸಿಕ್ಕಿದ
 ಖುಷಿಯಿಂದ ಬೀಗುತ್ತಿದ್ದ.







'ಸರಕಾರದ ಕೆಲಸ, ದೇವರ ಕೆಲಸ' ಎಂದು ಅಲ್ಲಿ ಬರೆಯಲಾಗಿತ್ತು
ಕಚೇರಿಯ ಸೀಟುಗಳು ಯಾರೂ ಇಲ್ಲದೆ ಖಾಲಿ ಖಾಲಿಯಾಗಿತ್ತು.






ಬಡತನ ಪರಿಹಾರಕ್ಕೆ ಮಂತ್ರ ಹೇಳಿ ಕೊಡುತಿದ್ದ ಗುರುಗಳೊಬ್ಬರು
ಬಡವರು ಕೊಡುತ್ತಿದ್ದ ಧಕ್ಷಿಣೆಯಿಂದ ಬಹಳ ಬೇಗನೆ ಶ್ರೀಮಂತರಾದರು.





ಲಂಚ ಕೊಡುವುದು ಅಪರಾಧ ಎಂದು ಕಚೇರಿಯಲ್ಲಿ ಬರೆದಿತ್ತು
ಲಂಚ ಕೊಟ್ಟ ಕೂಡಲೇ ಕೆಲಸವೆಲ್ಲ ಪಟ ಪಟನೆ ನಡೆದಿತ್ತು.


ಕಾರ್ಯಕ್ರಮದ ಆದಿಯಲ್ಲಿ ಭಾರತೀಯ ಸಂಸ್ಕ್ರತಿ ಬಗ್ಗೆ ಸಂವಾದ ನಡೆಯಿತು.
ಅಂತ್ಯದಲ್ಲಿ ಪಾಶ್ಚಿಮಾತ್ಯ  ಸಂಗೀತಕ್ಕೆ ಭರ್ಜರಿ ನೃತ್ಯ ಮಾಡಲಾಯಿತು.

ಸ್ವದೇಶೀ ಅಭಿಯಾನದ ಮುಂಚೂಣಿಯಲ್ಲಿ ಇದ್ದವ 

ಜಪಾನ್ ವಾಚ್ ಕಟ್ಟಿದ್ದ. ಐ ಫೋನ್ ನಲ್ಲಿ ಮಾತಾಡುತ್ತಿದ್ದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು