ಇದು ವಿಶ್ವದ ಉನ್ನತ 25 ಆಕರ್ಷಣೀಯ ಕೇಂದ್ರಗಳಲ್ಲಿ ಒಂದಾದ ಅಬುದಾಬಿಯಲ್ಲಿರುವ ಶೇಖ್ ಝಾಯಿದ್ ಮಸೀದಿಯ ಒಂದು ಭವ್ಯ ನೋಟ.
ಡಿಸೆಂಬರ್ 20, 2007 ರಲ್ಲಿ ಉದ್ಘಾಟನೆಗೊಂಡ ಈ ಮಸೀದಿಗೆ ಕಳೆದ ವರ್ಷ 47 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಮಸೀದಿಯ ಒಳಾಂಗಣದಲ್ಲಿ 10,000 ಮಂದಿಗೆ ಮತ್ತು ಹೊರಾಂಗಣದಲ್ಲಿ 30,000ಮಂದಿಗೆ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶವಿದೆ. ಈದ್ ಸಂದರ್ಭದಲ್ಲಿ 41 ಸಾವಿರಕ್ಕಿಂತಲೂ ಅಧಿಕ ಜನರು ಪ್ರಾರ್ಥನೆ ಸಲ್ಲಿಸಬಹುದಾಗಿದೆ.
30 ಎಕ್ರೆ ಸ್ಥಳದಲ್ಲಿ ವ್ಯಾಪಿಸಿರುವ ಶೈಖ್ ಝಾಯಿದ್ ಗ್ರ್ಯಾಂಡ್ ಮಸೀದಿಯಲ್ಲಿ ಈ ವರ್ಷದ ರಂಜಾನ್ ತಿಂಗಳ ಮೊದಲ ಹತ್ತೇ ದಿನದಲ್ಲಿ ಉಪವಾಸಿಗರನ್ನೊಳಗೊಂಡ 3,48,000 ಮುಸ್ಲಿಂ ಪ್ರಾರ್ಥನಾ ನಿರತ ಜನರು ಭೇಟಿ ನೀಡಿದ್ದಾರೆ ಎಂದು ವರದಿ ಹೇಳಿದೆ.
ಭೇಟಿ ನೀಡುವ ಬೃಹತ್ ಸಂಖ್ಯೆಯ ಜನರಿಗಾಗಿ ಮಸೀದಿ ನಿರ್ವಹಣಾ ಮಂಡಳಿಯು ಹನ್ನೆರಡು ಹವಾನಿಯಂತ್ರಿತ ಟೆಂಟ್‍ಗಳನ್ನು ಅಳವಡಿಸಿದ್ದು ರಂಝಾನ್ ಉಪವಾಸಿಗರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ.
ಅಬುದಾಬಿಯಲ್ಲಿರುವ ಸರ್ಕಾರಿ ಇಲಾಖೆಗಳು ಪವಿತ್ರ ರಂಝಾನ್ ಮಾಸದಲ್ಲಿ ಮಸೀದಿಗೆ ಆಗಮಿಸುವ ಪ್ರಾರ್ಥನಾರ್ಥಿಗಳಿಗೆ ಸುವ್ಯವಸ್ಥಿತ ಸೌಕರ್ಯ ಮತ್ತು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸದಾ ಸನ್ನದ್ಧವಾಗಿ ನಿಂತಿವೆ ಎಂದು ಗಲ್ಫ್ ಮಾಧ್ಯಮ ವರದಿ ಮಾಡಿದೆ.
ಮಾಹಿತಿ & ಚಿತ್ರ # ಗೂಗಲ್
0 ಕಾಮೆಂಟ್‌ಗಳು