ಈದ್ ಮುಬಾರಕ್





ಅದೋ ನೋಡಿ ಶವ್ವಾಲ್ ಬೆಳ್ಳಿಗೆರೆಯ  ಚಂದಿರ 
ಹಿರಿಯ ಕಿರಿಯರಾದಿಯಾಗಿ ಸರ್ವರಿಗೂ  ಸಡಗರ 


ಮಾಸ ಪೂರ್ತಿ ರಂಜಾನ್ ಮನದಿ ಹರುಷ  ತಂದಿತು 
ಮಗ್ರಿಬ್  ಇರುಳಿನೊಳಗೆ ಶುಭ ವಿದಾಯ ಎಂದಿತು 

ವ್ರತ  ನಮಾಜ್ ಮಾಡಿ ನಾವು ಭಕ್ತಿಯಲ್ಲಿ  ಮಿಂದೆವು
ಮಾಡಿದೆಲ್ಲ ಪಾಪಗಳಿಗೆ  ಕ್ಷಮೆಯ ಬೇಡಿ  ನಿಂತೆವು 


ಸುಳ್ಳು ಮೋಸ ರೋಷವಿಲ್ಲ ರಂಜಾನ್  ಎಂದೆವು 
ಪ್ರೀತಿಯನ್ನು ಮಾತ್ರ ಹಂಚಿ ದ್ವೇಷವನ್ನು  ಮರೆತೆವು 

ಮಾಸದ ಸ್ಫೂರ್ತಿಯು ವರ್ಷವಿಡೀ  ಹರಡಲಿ 
ಬಾಳಿನುದ್ದ ಶಾಂತಿ ಸಹನೆ  ನೆಮ್ಮದಿಯು  ಮೂಡಲಿ 

ನೀಲ ಬಾನಿನಿಂದ  ನೋಡಿ ನಗುತಿಹನು  ಚಂದ್ರಮ 
ಸರ್ವರಿಗೂ ಹಂಚಿ  ಬಿಡಿ, ಈದ್ ಮುಬಾರಕ್ ಸಂಭ್ರಮ 


ದಶ ದಿಕ್ಕು ಮೊಳಗಿ ಬರಲಿ  ತಕ್ಬೀರ್ ಧ್ವನಿಗಳು 
ಪರಸ್ಪರ ಆಲಿಂಗಿಸಿ ಹೇಳಿ  ಈದ್ ಶುಭಾಶಯಗಳು 


ಫಾರೂಖ್ ಕುಕ್ಕಾಜೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು