ಎಚ್ಚರ ...ನಕಲಿ ಏಜೆಂಟರಿದ್ದಾರೆ. ಎಚ್ಚರ...



ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವಿದ್ಯಾವಂತ ಯುವಕರು ವಿದೇಶ ಅಥವಾ ಗಲ್ಫ್ ನ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಒಂದು ಕಾಲದಲ್ಲಿ ಸಂದರ್ಶನ ವಿಸಾದಲ್ಲಿ  ಬಂದು ಉದ್ಯೋಗ ಹುಡುಕುವವರಿಗೆ  ಒಂದು ವಾರದೊಳಗೆ ಕೆಲಸ ದೊರಕುತ್ತಿತ್ತು. ಆದರೆ ಈಗ ಹಾಗಿಲ್ಲ. ಒಂದು ದಿನಕ್ಕೆ ವಿವಿಧ ದೇಶಗಳಿಂದ ಸಾವಿರಾರು ಜನರು ಉದ್ಯೋಗ ಹುಡುಕಿ ಬರುತ್ತಿದ್ದಾರೆ. ಆದರೆ ಅಷ್ಟು ಉದ್ಯೋಗಾವಕಾಶಗಳು ಈಗ  ಲಭ್ಯವಿಲ್ಲ.

ಇಂಥ ನಿರುದ್ಯೋಗಿಗಳನ್ನು ದೋಚಲೆಂದೇ  ಕೆಲವು ಅನಧಿಕೃತ  ಉದ್ಯೋಗ ಕೇಂದ್ರ / ಏಜನ್ಸಿಗಳು ದೇಶದಲ್ಲಿ ಮತ್ತು ವಿದೇಶದಲ್ಲಿ  ಹುಟ್ಟಿಕೊಂಡಿವೆ. ಗಲ್ಫ್  ಸರಕಾರ ಇದರ ಬಗ್ಗೆ ಸತತ ಎಚ್ಚರಿಕೆ ಕೂಡ  ನೀಡುತ್ತಿದೆ. ಆದರೂ ಬಲಿಯಾಗುವವರ ಸಂಖ್ಯೆ ಕಮ್ಮಿಯಾಗಿಲ್ಲ. ಸರಕಾರದ ಗಮನಕ್ಕೆ ಬಂದ  ಏಜೆನ್ಸಿಗಳನ್ನು ಮುಚ್ಚಿ ಸಂಬಂಧ ಪಟ್ಟವರನ್ನು ಸೆರೆ ಹಿಡಿಯಲಾಗುತ್ತಿದೆ.  

ಗಲ್ಫ್  ಸರಕಾರದ ಕಾನೂನು ಪ್ರಕಾರ  ಉದ್ಯೋಗಾರ್ಥಿಯಿಂದ  ಉದ್ಯೋಗ ನೀಡುವ ಸಲುವಾಗಿ ಯಾವುದೇ  ಕಂಪನಿ, ವ್ಯಕ್ತಿ ಯಾ ಸಂಸ್ಥೆಗಳು ಉದ್ಯೋಗ ವೀಸಾಗಳಿಗೆ ಹಣ ಪಡೆಯುವಂತಿಲ್ಲ ಎಂಬುದನ್ನು ತಾವು ಗಮನದಲ್ಲಿಟ್ಟುಕೊಳ್ಳಬೇಕು.

ನಕಲಿ  ಏಜೆಂಟ್ ಗಳು ನೀವು ಕಳುಹಿಸಿದ  CV ಯ ಮಾಹಿತಿಯ ಮೂಲಕ  ವಿವಿಧ ರೀತಿಯಲ್ಲಿ  ನಿಮ್ಮನ್ನು ಸಂಪರ್ಕಿಸಿ  ಇಂಟರ್ವ್ಯೂ ನಡೆಸುತ್ತಾರೆ . ವಿವಿಧ ಉದ್ಯೋಗದ ಆಮಿಷ  ನಿಮ್ಮ ಮುಂದಿಟ್ಟು ಕೊಂಡು ಇಂಟರ್ವ್ಯೂ ನಡೆಸುತ್ತಾರೆ.ಇಂಟರ್ವ್ಯೂ ಮುಗಿದ ಎರಡು ಮೂರು ದಿನಗಳ ನಂತರ ನಿಮಗೆ ಉದ್ಯೋಗಕ್ಕ್ಕೆ  ಕರೆ ಬರುತ್ತದೆ ಎಂದು ಹೇಳಿ ಅದೇ ಸಂಧರ್ಭದಲ್ಲಿ ಅವರ ಚಾರ್ಜ್ ಎಂದು ಇನ್ನೂರು  ಮುನ್ನೂರು ದಿರ್ಹಾಂ/ರಿಯಲ್ಸ್ /ದಿನಾರ್  ನಿಮ್ಮಿಂದ ಪಡೆಯುತ್ತಾರೆ.  ಜಾಬ್ ಆಫರ್ ಲೆಟರ್  ದೊರೆತೊಡನೆ ಅರ್ಧ ಸಂಬಳ ನೀಡುವಂತೆ ಕೇಳಿಕೊಳ್ಳುತ್ತಾರೆ. ಮೊದಲೇ ನಿರುದ್ಯೋಗಿಯಾಗಿರುವ ನೀವು ಇದೆಲ್ಲಕ್ಕೆ ಒಪ್ಪಿಕೊಳ್ಳುತ್ತೀರಿ. ಆದರೆ ಹೀಗೆ ಹಣ ಪಡೆದ ಕೆಲವು ದಿನದ  ನಂತರ ಹಣ ಪಡೆದವರ ಸುದ್ದಿಯೇ ಇರುವುದಿಲ್ಲ. 

  ಇಂಥ ಮೋಸಗಾರರು  ಹೆಚ್ಚಾಗಿ  ವಿಸಿಟ್ ವೀಸಾದಲ್ಲಿ ಕೆಲಸ ಹುಡುಕುತ್ತಿರುವವರನ್ನು ಗುರಿ ಮಾಡಿಕೊಂಡಿದ್ದಾರೆ.   ಆದುದರಿಂದ ಇಂಥ ಮೋಸದ ಜಾಲಕ್ಕೆ ಬಲಿಯಾಗಿ  ನಿಮ್ಮ ಹಣ, ಸಮಯ ವ್ಯರ್ಥ ಮಾಡಿಕೊಳ್ಳಬೇಡಿ.


~ಉಫಾಕು

www.ufaku.blogspot.com

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು