ನಾನು ಜಾನ್ ವೂ.

 



ಅದು ಅಂದಾಜು 10 ಗಂಟೆಗಳ ವಿಮಾನ ಹಾರಾಟದ ಅವಧಿ.  ಅವರು ಕೊರಿಯಾದ ಸಿಯೋಲ್‌ನಿಂದ ಅಮೇರಿಕ ಸಂಯುಕ್ತ ಸಂಸ್ಥಾನದ  ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗುತ್ತಿದ್ದರು.

ಆ ಪುಟ್ಟ  ತಾಯಿ ವಿಮಾನದಲ್ಲಿ ಇದ್ದ ಆಂದಾಜು 200 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಪ್ರತಿಯೊಬ್ಬರಿಗೂ ಪ್ಲಾಸ್ಟಿಕ್ ಚೀಲವನ್ನು ವಿತರಿಸುತ್ತಿದ್ದರು. ಆ ಪ್ಲಾಸ್ಟಿಕ್  ಚೀಲವು ಕ್ಯಾಂಡಿ, ಚೂಯಿಂಗ್ ಗಮ್ ಮತ್ತು ಇಯರ್‌ಪ್ಲಗ್‌ಗಳನ್ನು ಹೊಂದಿದ್ದು, ವಿಮಾನ ಹಾರಾಟದ ಸಮಯದಲ್ಲಿ ತನ್ನ ನಾಲ್ಕು  ತಿಂಗಳ ಮಗು ಕಿರುಚಿದಾಗ ಅವುಗಳನ್ನು ಬಳಸುವುದಕ್ಕಾಗಿ ನೀಡುವ ಮೂಲಕ  ಒಂದು ರೀತಿಯ ಮುಂಗಡ ಕ್ಷಮೆಯಾಚನೆಯಾಗಿತ್ತು . 

ಆ ತಾಯಿ ನೀಡಿದ ಆ ಪ್ಲಾಸ್ಟಿಕ್  ಬ್ಯಾಗ್‌ನಲ್ಲಿ ಒಂದು ಚಿಕ್ಕ ಚೀಟಿಯಲ್ಲಿ ಒಂದು  ಸಂದೇಶವಿತ್ತು. "ಹಲೋ, ನಾನು ಜಾನ್ ವೂ. ನನಗೆ ಈಗ 4 ತಿಂಗಳಾಗಿದೆ.  ಇಂದು ನಾನು,  ನನ್ನ ತಾಯಿ ಮತ್ತು ಅಜ್ಜಿಯೊಂದಿಗೆ ನನ್ನ ಚಿಕ್ಕಮ್ಮ ಇರುವ ಅಮೇರಿಕಾಕ್ಕೆ ಪ್ರಯಾಣಿಸುತ್ತಿದ್ದೇನೆ. ನನಗೆ ಸ್ವಲ್ಪ ಆತಂಕ ಮತ್ತು ಭಯವಾಗಿದೆ. ಇದು ನನ್ನ ಮೊದಲನೆಯ ವಿಮಾನ ಪ್ರಯಾಣ . ನನ್ನ ಜೀವನದ ಮೊದಲ  ಹಾರಾಟ ಆದ ಕಾರಣ  ನಾನು ಅಳುವುದು ಅಥವಾ ಸ್ವಲ್ಪ ತೊಂದರೆ ಉಂಟುಮಾಡುವುದು ಸಹಜ. ನಾನು ಸಾಧ್ಯವಾದಷ್ಟು ಶಾಂತವಾಗಿರಲು ಪ್ರಯತ್ನಿಸುತ್ತೇನೆ. ಆದರೆ ನಾನು ನಿಮಗೆ ಪೂರ್ಣ ಭರವಸೆ ನೀಡಲು ಸಾಧ್ಯವಿಲ್ಲ. ನನ್ನ ಧ್ವನಿ ತುಂಬಾ ಜೋರಾಗಿದ್ದರೆ ದಯವಿಟ್ಟು  ಇಯರ್‌ಪ್ಲಗ್‌ಗಳನ್ನು ಬಳಸಿ. ನಿಮ್ಮ ಪ್ರವಾಸವನ್ನು ಆನಂದಿಸಿ. ಧನ್ಯವಾದಗಳು"



ಇದು ಇತರರ ಸ್ವಾತಂತ್ರ್ಯವನ್ನು ಗೌರವಿಸುವ ಸಂಸ್ಕೃತಿ ಮತ್ತು .ಸಭ್ಯತೆ ...   ಇದರಿಂದ ನಾವು ಕಲಿಯುವುದು ಬಹಳಷ್ಟಿದೆ ... ಒಂದು ಚಿಕ್ಕ ಬಾವಿಯಲ್ಲಿ ಕುಳಿತು ಆರ್ಭಟಿಸುವ ನಮ್ಮ ಕೆಲವು ಕಪ್ಪೆಗಳು ಒಮ್ಮೆ ಸಮುದ್ರ ನೋಡಿ ಬರಬೇಕು ... ಆಗ ವಟಗುಟ್ಟುವಿಕೆ ಕಡಿಮೆಯಾಗುತ್ತದೆ.   

ಮೂಲ : ಹೋಪ್ ಶ್ರೈಬರ್ -ಯಾಹೂ ಲೈಫ್ 

ಅನುವಾದ : ಉಫಾಕು 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು